ಇಬ್ಬನಿ ತಬ್ಬಿದ ಇಳೆಯಲಿ
ಬಿ. ಆರ್. ಛಾಯಾ
ದೊಡ್ಡರಂಗೇಗೌಡ
ಅಗಸ್ತ್ಯ
ಇಬ್ಬನಿ ತಬ್ಬಿದ ಇಳೆಯಲಿ ರವಿ ತೇಜ ಕಣ್ಣ ತೆರೆದು
ಬಾನಾ ಕೋಟಿ ಕಿರಣ ಇಳಿದು ಬಂತು ಭೂಮಿಗೆ|| ಪ ||
ಹಾಡು ಹಕ್ಕಿಕೂಗಿ ಇಂಪಾದ ಗಾನವು
ಗಾಳಿ ಬೀಸಿಬೀಸಿ ಮಧು ಮಧುರ ತಾಣವು
ಬೆಳಕ್ಕಿ ಕೂಗಿ ಪಲ್ಲಕ್ಕಿ ಕಣ್ಣಲ್ಲಿ ಭಾವ ಉಕ್ಕುಕ್ಕಿ
ಮೊಲ್ಲೆ ಮರದ ಜಾಜಿ ಸೊಗಸಾಗಿ ಅರಳಿ ತನನದ ಕಾವ್ಯ || ೧ ||
ದೂರ ನಿಂತ ಬೆಟ್ಟ ಗಂಭೀರ ಮೌನವು
ಟೊಂಗೆ ಟೊಂಗೆ ಸೇರಿ ಹಸಿ ಹಸಿರ ಲಾಸ್ಯವು
ಅತ್ತಿತ್ತ ಧಾರೆ ಚೆಲ್ಲುತ್ತ ಧುಮ್ಮಿಕ್ಕಿ ನದಿಯು ಓಡುತ್ತ
ಹಾವು ಹರಿದ ರೀತಿ ಚೆಲುವಾಗಿ ಹರಿವ ಕಾವೇರಿಯ ನಾಟ್ಯ || ೨ ||